#ಈ_ಕವಿತೆ_ಬರೆದ_ಅನಾಮಿಕನಿಗೆ_ಒಂದು_ಸಲಾಂ.
............
ಉಗ್ರರ ಗುಂಡಿನಿಂದ ಸತ್ತ ಸೈನಿಕನೊಬ್ಬ ಕೊನೆಯುಸಿರುಳಿಯುವ ಮುನ್ನ ತನ್ನ ಗೆಳೆಯನಿಗೆ ಬರೆದದ್ದು...
======================
ಮನೆಗೆ ಹೋಗಿ ನನ್ನ ಸಾವಿನ ಸುದ್ದಿ
ಒಮ್ಮೆಲೇ ಕೊಡಬೇಡ ಗೆಳೆಯ
ನನ್ನವರ ಹೃದಯಗಳು ಒಡೆದಾವು.
ನನ್ನ ಅಮ್ಮ ನನ್ನ ಬಗ್ಗೆ ಕೇಳಿದರೆ
ಉರಿಯುತ್ತಿರುವ ದೀಪವನು ಆರಿಸಿಬಿಡು
ಆದರೂ ಅರ್ಥವಾಗಲಿಲ್ಲವೆಂದರೆ
ನಿನ್ನ ಕಣ್ಣಲ್ಲಿ ಎರಡು ಹನಿ ಸುರಿಸಿಬಿಡು.
ನನ್ನ ಅಪ್ಪ ನನ್ನ ಬಗ್ಗೆ ಕೇಳಿದರೆ
ಅವರ ಬೆನ್ನನ್ನೊಮ್ಮೆ ನೇವರಿಸಿಬಿಡು
ಆದರೂ ಅರ್ಥವಾಗಲಿಲ್ಲವೆಂದರೆ
ಅವರ ಊರುಗೋಲನ್ನೇ ಮುರಿದುಬಿಡು.
ನನ್ನ ತಂಗಿ ನನ್ನ ಬಗ್ಗೆ ಕೇಳಿದರೆ
ಬರಿದಾದ ಕೈಯ ಮಣಿಕಟ್ಟ ತೋರಿಸು,
ಆದರೂ ಅರ್ಥವಾಗಲಿಲ್ಲವೆಂದರೆ
ರಕ್ತ ಸಿಕ್ತವಾದ ಈ ರಾಖಿಯನು ಮುಂದಿರಿಸು.
ನನ್ನ ತಮ್ಮ ನನ್ನ ಬಗ್ಗೆ ಕೇಳಿದರೆ
ನಾ ಬರುತಿದ್ದ ಬರಿದಾದ ದಾರಿ ತೋರಿಸು,
ಆದರೂ ಅರ್ಥವಾಗಲಿಲ್ಲವೆಂದರೆ
ಅವನ ಮುಖವನ್ನೊಮ್ಮೆ ಎದೆಗವಚಿ ಸಂತೈಸು.
ನನ್ನ ಹಂಡತಿ ನನ್ನ ಬಗ್ಗೆ ಕೇಳಿದರೆ
ತಲೆ ತಗ್ಗಿಸಿ ಒಂದು ದೀರ್ಘ ನಿಟ್ಟುಸಿರ ಬಿಡು,
ಆದರೂ ಅರ್ಥವಾಗಲಿಲ್ಲವೆಂದರೆ
ಅವಳ ಕಾಲಿಗೆ ಬಿದ್ದು, ಕಾಲುಂಗರ ತೆಗೆದು ಬಿಡು.
ನನ್ನ ಮಗಳು ನನ್ನ ಬಗ್ಗೆ ಕೇಳಿದರೆ
ಅವಳ ಹಣೆಗೊಂದು ಹೂವ್ ಮುತ್ತನಿಡು,
ಆದರೂ ಅರ್ಥವಾಗಲಿಲ್ಲವೆಂದರೆ
ಅವಳನ್ನು ಬಿಗಿದಪ್ಪಿ ಜೋರಾಗಿ ಅತ್ತುಬಿಡು.
ಮನೆಗೆ ಹೋಗಿ ನನ್ನ ಸಾವಿನ ಸುದ್ದಿ
ಒಮ್ಮೆಲೇ ಕೊಡಬೇಡ ಗೆಳೆಯ
ನನ್ನವರ ಹೃದಯಗಳು ಒಡೆದಾವು.
=================
0 Comments